`ಪರಪಂಚದ` ಮಾತು
Posted date: 18 Wed, Jun 2014 – 12:00:33 AM

 ಯೋಗರಾಜ್ ಮೂವೀಸ್ ಹಾಗೂ ವೇದಂ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಪರಪಂಚ‘ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.   ವೆಜ್ ಎಂಡ್  ನಾನ್‌ವೆಜ್ ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು ನಾಲ್ಕು ಹಾಡುಗಳನ್ನು ಯೋಗರಾಜ್‌ಭಟ್ ಹಾಗೂ ಒಂದು ಹಾಡನ್ನು ಜಯಂತಕಾಯ್ಕಿಣಿ ಬರೆದಿದ್ದಾರೆ. ವೀರಸಮರ್ಥ್ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಸುರೇಶ್ ಸಂಕಲನ ಹಾಗೂ ಶಶಿಧರ್ ಅಡಪರ ಕಲಾ ನಿರ್ದೇಶನ ‘ಪರಪಂಚ‘ಕ್ಕಿದೆ. ಡಾ:ರವಿರಾಜ್ ಹಾಗೂ ರುದ್ರಪ್ಪ ಈ ಚಿತ್ರದ ಸಹ ನಿರ್ಮಾಪಕರು.
ದಿಗಂತ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ರಾಗಿಣಿ. ಯೋಗರಾಜ್‌ಭಟ್, ದತ್ತಣ್ಣ,  ಕೆ.ಎಸ್.ಎಲ್.ಸ್ವಾಮಿ, ಅನಂತನಾಗ್, ವಿ.ಮನೋಹರ್, ವಿಕಾಸ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಾಯಕ ಯೋಗೀಶ್ ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ‘ಜಯಮ್ಮನ ಮಗ‘ ಚಿತ್ರದ ನಿರ್ದೇಶಕ ವಿಕಾಸ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed